Welcome

ನಮ್ಮ‌ ಹಿನ್ನಲೆ:

ನಾವು 2006 ನೇ ಇಸ್ವಿಯಲ್ಲಿ ಸಾರ್ವಜನಿಕ‌ ಹಿತಾಸಕ್ತಿ ವೇದಿಕೆಯನ್ನು ಸ್ಥಾಪಿಸಿ ನೋಂದಣಿ ಮಾಡಿಸಿಕೊಂಡು ಸಾಮಾಜಿಕ‌ ಸೇವೆಗೆ ಪಾದಾರ್ಪಣೆಮಾಡಿದ್ದೇವೆ. ಈ ವೇದಿಕೆಯ‌ ಮೂಲಕ‌ ನಾವು

ಜನರ ಸಮಸ್ಯೆಗೆ ಧ್ವನಿಯಾಗಿ ಮಾಡಿದ ಕೆಲವು ಕೆಲಸಗಳು:

1. ಸಾರ್ವಜನಿಕರಿಗೆ ಸರ್ಕಾರ‌ ನೀಡುತ್ತಿದ್ದ‌ ಆಹಾರ‌ ಧಾನ್ಯಗಳು ಅರ್ಹ‌ ಫಲಾನುಭವಿಗಳಿಗೆ ಸರಿಯಾಗಿ ವಿತರಣೆಯಾಗಲು ವಿತರಕರ‌ ಮತ್ತು ಫಲಾನುಭವಿಗಳ‌ ವೈಮನಸ್ಸನ್ನು ಶಾಂತಗೊಳಿಸಿ ಸಹಕರಿಸಿದ್ದೇವೆ.

2. ಅದೇ ರೀತಿ ಸೀಮೆ ಎಣ್ಣೆ ವಿತರಕರ‌ ಹಾಗೂ ಫಲಾನುಭವಿಗಳಿಗೂ ನೆರವಾಗಿದ್ದೇವೆ.

3. ಬಳ್ಳಾರಿ ನಗರದ‌ ಹೆಸರಾದಂತಹ‌ ಸರ್ಕಾರಿ ವಿಮ್ಸ್ ಆಸ್ಪತ್ರೆಯಲ್ಲಿ :

ಅ) 2006ರಲ್ಲಿ ಕೇವಲ‌ 38 ಔಷದಗಳು ಮಾತ್ರ‌ ಬಡವರಿಗೆ ಉಚಿತವಾಗಿ ನೀಡುತ್ತಿದ್ದರು. ಇದನ್ನು ಹೆಚ್ಚಿಸಲು ಅಂದಿನ‌ ವಿಮ್ಸ್ ನ‌ ಮಾನ್ಯ‌ ನಿರ್ದೇಶಕರಾದ‌ ಡಾ. ಖಾಜಾ ನಸೀರುದ್ಧೀನ್ ರವರ‌ ಗಮನಕ್ಕೆ ತಂದು ವೇದಿಕೆಯು ಸತತ ಪ್ರಯತ್ನನೆಡೆಸಿತ್ತು. ಅದೇರೀತಿ ವೈದ್ಯರ‌ ಸೇವೆಗಳು ಬಡವರಿಗೆ ಸಕಾಲಕ್ಕೆ ಸಿಗಲು ಪ್ರಯತ್ನಮಾಡಲಾಯಿತು.

ಆ) 2008 ನೇ ಇಸ್ವಿಯಲ್ಲಿ ಡಾ. ದೇವಾನಂದ್ ರವರು ವಿಮ್ಸ್ ನ‌ ನಿರ್ದೇಶಕರಾದ‌ ಬಳಿಕ‌ ನಮ್ಮ‌ ವೇದಿಕೆಯು ಪುನಃ ಔಷದಗಳ‌ ಹೆಚ್ಚಳಕ್ಕೆ ಮನವಿ ಸಲ್ಲಿಸಲಾಯಿತು. ಮಾನ್ಯ‌ ಡಾ. ದೇವಾನಂದ್ ರವರು ನಮ್ಮ‌ ಮನವಿಯನ್ನು ಸಕಾರಣವಾಗಿ ಪರಿಗಣಿಸಿ 38 ಔಷದಗಳಿಂದ‌ 140 ಔಷದಗಳಿಗೆ ಹೆಚ್ಚಿಸಿದರು. ಹಾಗೆಯೇ ವಿಮ್ಸ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಂತ‌ಹ‌ 'ಡಿ' ವರ್ಗದ‌ ಸಿಬ್ಬಂದಿಗೆ  ಗುತ್ತಿಗೆದಾರರು ಸಕಾಲಕ್ಕೆ ಸಂಬಳವನ್ನು ನೀಡದೇ ಸತಾಹಿಸುತ್ತಿದ್ದರು. ಈ ವಿಷಯವನ್ನು ಮಾನ್ಯ‌ ಡಾ. ದೇವಾನಂದ್ ರವರ ಗಮನಕ್ಕೆ ತಂದು ಈ ಸಿಬ್ಬಂದಿ ವರ್ಗದವರಿಗೆ ಬ್ಯಾಂಕ್ ಖಾತೆಯನ್ನು ತೆರೆಯಿಸಿ ನೇರವಾಗಿ ಅವರ‌ ಖಾತೆಗೆ ಜಮ ಮಾಡುವ‌‌ ವ್ಯವಸ್ಠಯನ್ನು ಮಾಡಲು ಶ್ರಮವಹಿಸಿ ಯಶಸ್ಸು ಕಂಡಿದ್ದೇವೆ. ನಮ್ಮ‌ ವೇದಿಕೆಯ‌ ಸಂದರ್ಶನ‌ ಚೀಟಿಯ‌ (Visiting Card) ಮೇಲೆ  "ಜನರ‌ ಸಮಸ್ಯೆಗೆ ಧ್ವನಿ" ಯೆಂಬ‌ ವಾಕ್ಯ‌ ಭಾಗದಲ್ಲಿ "ಲಂಚ‌ ರಹಿತ‌ ಉತ್ತಮ‌ ಸಮಾಜಕ್ಕಾಗಿ" ಯೆಂಬ‌ ವಾಕ್ಯ ಹಿಂದಿನ‌ ಭಾಗದಲ್ಲಿ  ಮುದ್ರಿಸಲಾಗಿರುತ್ತದೆ. ವೇದಿಕೆಯ‌ 5000ರಕ್ಕು ಅಧಿಕ‌  ಸಂದರ್ಶನ‌ ಚೀಟಿಗಳನ್ನು (Visiting Card) ಬಳ್ಳಾರಿ ನಗರ‌ ಹಾಗೂ ಗ್ರಾಮಾಂತರ‌ ಪ್ರದೇಶಗಳ ಜನರಿಗೆ ನೀಡಿದ್ದೇವೆ. ಈ ಚೀಟಿಗಳನ್ನು ತೋರಿಸಿ ಜನರು ಸರ್ಕಾರಿ ಕಛೇರಿಗಳಲ್ಲಿ ಯಾವುದೇ ಲಂಚ‌ ನೀಡದೇ ಕೆಲಸಗಳನ್ನು ಪಡೆಯುತ್ತಿದ್ದಾರೆ. ಇದು ಒಂದು ರೀತಿಯ‌ ಶಾಂತಿಯುತ‌ ಕ್ರಾಂತಿಯ‌‌ ಬದಲಾವಣೆಗೆ ನಾಂದಿಯಾಗಿದೆ.

2008 ನೇ ಇಸ್ವಿಯಲ್ಲಿ ರಾಷ್ರೀಯ‌ ಹೆದ್ದಾರಿ 63 (NH63) ಸಂಪೂರ್ಣವಾಗಿ ಹಾಳಾಗಿ ಹೋಗಿದ್ದರಿಂದ‌ ಇದನ್ನು ದುರಸ್ತಿಗೊಳಿಸಲು ಕೇಂದ್ರ‌ ಸರ್ಕಾರ‌ ಅಲಕ್ಷ್ಯ‌ ದೋರಣಿ ತೋರಿಸುತ್ತಿದ್ದ‌ ಕಾರಣ‌ ನಮ್ಮ‌ ವೇದಿಕೆಯು ಮೂರು ದಿನಗಳ‌ ಕಾಲ‌ ಸರದಿ ಉಪವಾಸ‌ ಸತ್ಯಾಗ್ರಹವನ್ನು ನಡೆಸಿ ಆ ನಂತರ‌ರಾಷ್ರೀಯ‌ ಹೆದ್ದಾರಿ 63 (NH63)ರ‌ ಮುಖ್ಯ‌ ಇಂಜನೀಯರಾದ‌ ಶ್ರೀ ಪಂಡ್ಯ‌ರವರು, ಬೆಂಗಳೂರು, ಇವರ‌ ಗಮನಕ್ಕೆ ತಂದು ಅದಕ್ಕೆ ಬೇಕಾದ‌ ಹಣವನ್ನು ಬಿಡುಗಡೆಯಾಗಲು ಶ್ರದ್ದೆ‌ ವಹಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ನಮ್ಮ‌ ಅಳಿಲು ಸೇವೆಯನ್ನು ಮಾಡಿದ್ದೇವೆ.

We began our social services  in 2006 by registering our team by name & style "  saarvajanika hithasakti vedike (ri) ". We are rendering service to the mankind  in the Bellary City since 2006. We are helping the poor to get their Food grains correctly from the Fair Price Shop dealers and Kerosine vendors. Apart from it, we are: 

1) We were helped to improve the VIMS Hospital Services like:

a) Doctors Services, Nurses and other staff and contract workers too.

b) Water Supply

c) We were Discussed with Directors of VIMS to increase more Medicines to the needy  as a result Dr. Devanand  Director VIMS has increased to 140 medicines from 38 items.

2) Distributed more than 5000 VEDIKE Cards to General Public. Our VEDIKE Card is having SLOGON " JANARA SAMASYEGE DHVANI" and " LANCHA RAHITHA UTTAMA SAMAJAKKAAGI" So the Govt. Officials are helping the needy one, General Public  are get their works done without any corruption at all Govt. Offices. 

We believe our state is full of hard-working and deserving citizens. Our work in the Bellary City is geared up towards making sure our state people will practice the same and get benefitted for their efforts and gives them the chance to succeed. It is an honor to work for better Karnataka State.  We desired to build  our State Rich by creating more and more employment at all sectors.

 ನಾವು ಜನಹಿತ‌ ಪ್ರಾದೇಶಿಕ‌ ಪಕ್ಷ‌ ಕಟ್ಟಲು ಕಾರಣ:

ನಮ್ಮ‌ ಕರ್ನಾಟಕ‌ ರಾಜ್ಯವು ಜೀವ‌ ನದಿಗಳಿಂದ‌, ಅರಣ್ಯಗಳಿಂದ‌, ಪಶ್ಚಿಮ‌ ಘಟ್ಟಗಳಿಂದ‌, ನೈಸರ್ಗಿಕ‌ ಸಂಪತ್ತಿನಿಂದ‌, ಬಯಲುಸೀಮೆಯಿಂದ‌, ವಿಜ್ನಾನಿಗಳಿಂದ‌, ಬುದ್ಧಿಜೀವಿಗಳಿಂದ‌, ಶ್ರಾಮಿಕರಿಂದ‌, ಉದ್ಯಮಿಗಳಿಂದ‌, ಗಣಿಗಾರಿಕೆಯಿಂದ‌, ಕೈಗಾರಿಕೆಗಳಿಂದ‌, ಸುಸಂಪದ್ಭರಿತವಾಗಿದೆ. ಆದರೂ ಬಡತನ‌ ಇನ್ನೂ ಜೀವಂತವಾಗಿರುವುದು ವಿಚಾರಕ್ಕೆ ಒಳಮಾಡಿತು.

ಇಂದು ರಾಜಕಾರಣ‌ ಮಾಡುತ್ತಿರುವ‌ ಬಹುತೇಕ‌ ಪಕ್ಷಗಳು ಹಣದ‌ ಬಲದಿಂದ‌ ಚುನಾವಣೆಯಲ್ಲಿ ಗೆಲ್ಲುವುದರಿಂದ‌ ತಮ್ಮ‌ ಬಂದವಾಳಕ್ಕೆ ಬಡ್ಡಿ, ಚಕ್ರ‌ ಬಡ್ಡಿ, ಮತ್ತು ಹಲವು ವರ್ಷಗಳಿಗೆ ಅಥವಾ ತಲೆಮಾರುಗಳ‌ ವರೆಗೂ ಬೇಕಾದ‌ ಸಂಪಾದನೆಗೆ ಚಿಂತಿಸುತ್ತಿರುವುದು ಬಹಿರಂಗದ‌ ಸಂಗತಿಯಾಗಿದೆ. ಅಷ್ಟಲ್ಲದೇ, ಇಂದು ಎಲ್ಲಾ ಪಕ್ಷಗಳಲ್ಲಿ ಬಹುತೇಕವಾಗಿ ಹಳೇ ತಲೆಮಾರಿನ‌ ನಾಯಕರಿಂದ‌ ಮತ್ತು ಅವರ‌ ಸಂತಾನಗಳೇ ಮುಂದುವರೆಯುವುದರಿಂದ‌‌, ಇತರರಿಗೆ, ಯುವಕರಿಗೆ, ಉತ್ಸಾಹಿಗಳಿಗೆ, ವೈಜ್ನಾನಿಕವಾಗಿ ಚಿಂತಿಸುವವರಿಗೆ, ಹೊಸ‌ ಹೊಸ‌ ಯೋಜನೆಗಳನ್ನು ರೂಪಿಸುವವರಿಗೆ ಸರಿಯಾದ‌ ಅವಕಾಶಗಳು ಸಿಗದೆ ವಂಚಿತವಾಗುತ್ತಿರುವುದರಿಂದ‌ ನಮ್ಮ‌ ರಾಜ್ಯದಲ್ಲಿ ಬಡತನ‌ ಹೆಚ್ಚಾಗುತ್ತಿದೆ.

ಇದನ್ನು ತಪ್ಪಿಸಲು:

1. ಇಂದಿನ‌ ಆರ್ಥಿಕ‌ ಅಭಿವೃದ್ಧಿಗೆ ‌ ವಿದ್ಯುತ್ತೇ ಮೂಲ ಆಧಾರ:‌

ಆದರೆ ಇದಕ್ಕೆ ಸರಿಯಾದ‌ ಗಮನ‌ ಹರಿಸದ‌ ಹಿಂದಿನ‌ ಎಲ್ಲಾ ಸರ್ಕಾರಗಳೇ ಕಾರಣ‌ ಅದೇ ದಾರಿಹಿಡಿದು ಇಂದಿನ‌ ಶ್ರೀ ಸಿದ್ದರಾಮಯ್ಯ‌ ರವರ‌ ಸರ್ಕಾರವು ನಡೆಯುತ್ತಿರುವುದು ವಿಚಾರಕರವಾಗಿದೆ. ಪ್ರಸ್ತುತ‌ ಲಭ್ಯವಿರುವ‌ ಸೌರ‌ ವಿದ್ಯುತ್ ತಂತ್ರಜ್ನಾನದಿಂದ‌ ನಮ್ಮ‌ ಕರ್ನಾಟಕ‌ ರಾಜ್ಯದಲ್ಲಿ ಸರಿಸುಮಾರು 15,000 (ಹದಿನೈದು ಸಾವಿರ‌) ಮೆಘಾ ವ್ಯಾಟ್ ಸೌರ‌ ವಿದ್ಯುತ್ತನ್ನು ಉತ್ಪಾದಿಸಲು ಅವಕಾಶವಿದೆ ಅಂದರೆ ಪರಿಸರ‌ ಹಾಳುಮಾಡದೇ ಉತ್ಪಾದಿಸಬಹುದಾದ‌ ಮೂಲವನ್ನು ಕಡೆಗಣಿಸಿ ಇತರೆ ರಾಜ್ಯಗಳಿಂದ‌ ಖ‌ರೀದಿಸಲು ತಯಾರಿ ನಡೆಸುತ್ತಿದೆ. ಈ ವರೆಗೂ 1,000 (ಒಂದು ಸಾವಿರ‌) ಮೆಘಾ ವ್ಯಾಟ್ ಕೂಡಾ ಉತ್ಪಾದಿಸಲು ಸಾಧ್ಯವಾಗಲಿಲ್ಲ‌. ಅದೂ ಅಲ್ಲದೇ ವಿದ್ಯುತ್ ಲೈನ್ ಲಾಸ್, ಕಳ್ಳತನ‌ ತಡೆ, ಬೇಬಾಕಿ ವಸೂಲಾತಿಗೆ (ರಾಜಕಾರಣಿಗಳಿಂದ‌) ಕ್ರಮ‌ ಜರುಗಿಸದೇ ಕೈ ಚಲ್ಲಿ ಕುಳಿತಿದೆ. ಅಷ್ಟಲ್ಲದೇ ಉಳಿತಾಯದ‌ ಮಾರ್ಗಗಳನ್ನು ಅನ್ವೇಷಣೆಮಾಡದೇ ವಿದ್ಯುತ್ ಗ್ರಾಹಕರ‌ ಮೇಲೆ ಬಿಲ್ ಭಾರ‌ ಹಾಕುತ್ತಿದ್ದಾರೆ ಇದು ಕ್ಷಮಿಸಲಾರದ‌ ಕ್ರಮವಾಗಿದೆ ಇದಕ್ಕೆ ಕಡಿವಾಣ‌ ಹಾಕಲೇಬೇಕು.

2. ನಮ್ಮ‌ ನಾಡಿನ‌ ವಿಜ್ನಾನಿಗಳ‌ ಅಪಾರವಾದ‌ ಅನುಭವ‌, ಸಂಶೋಧನೆಗಳ‌ ಫಲಗಳನ್ನು ಅನುಷ್ಟಾನಕ್ಕೆ ತರಲು ಜವಾಬ್ದಾರಿತನ‌ ಹೋರಬೇಕಾದ‌ ಸರ್ಕಾರ‌ ಸ್ಠಾಪನೆಗಾಗಿ ಈ ಹೊಸ‌ ಪ್ರಾದೇಶಿಕ‌ ಪಕ್ಷವನ್ನು ರಚಿಸಲಾಗಿದೆ.

3. ಈಗಿರುವ‌ ಜಲಾಶಯಗಳ‌ ನೀರನ್ನು ಇನ್ನು ವೈಜ್ಞನಿಕವಾಗಿ ಸಮರ್ಪಕರೀತಿಯಲ್ಲಿ ಬಳಸಿಕೊಂಡು ಕೃಷಿ ಭೂಮಿಯ‌ ವಿಸ್ತರಣೆಯನ್ನು ಎರಡು ಪಟ್ಟುಮಾಡಬೇಕಾಗಿದೆ. ಅದರಿಂದ‌ ಆಹಾರ‌ ಧಾನ್ಯಗಳನ್ನು, ತರಕಾರಿಗಳನ್ನು, ಫಲ‌ ‍- ಫುಷ್ಪಗಳನ್ನು, ಬೇಳೆ ಕಾಳುಗಳನ್ನು, ಎಣ್ಣೆ ಕಾಳುಗಳನ್ನು ಅಧಿಕವಾಗಿ ಉತ್ಪಾದಿಸಿ ನಾಡನ್ನು ಸದಾ ಅನ್ನಪೂರ್ಣೆಯಾಗಿ ಅಭಿವೃದ್ಧಿ ಪಡಿಸುವ‌ ಆಶಯದೊಂದಿಗೆ ಈ ಜನಹಿತ‌ ಪಕ್ಷವನ್ನು ಸ್ಠಾಪಿಸಲಾಗಿದೆ.

4. ಮುಂದಿನ‌ ಚುನಾವಣೆ ಬರುವವರೆಗೂ ಈಗಿರುವ‌ ಸರ್ಕಾರಕ್ಕೆ ಜನಪರ‌, ಜನಹಿತ‌ ಯೋಜನೆಗಳ‌ ಸೂಚನೆ, ಸಲಹೆಗಳನ್ನು ನೀಡಿ ನಾಡನ್ನು ಕಟ್ಟುವ‌ ಕೆಲಸ‌ ಮಾಡುತ್ತಿದ್ದೇವೆ. 

 

ಬನ್ನಿ ಕೈ ಜೋಡಿಸಿರಿ ... ಸ್ವಾವಲಂಭಿ ಸಮೃದ್ಧ‌ ಕರ್ನಾಟಕದ‌ ನಿರ್ಮಾಣ‌ ಮಾಡುವುದರಲ್ಲಿ ಭಾಗಿಯಾಗಿರಿ.