ನಮ್ಮ‌ ನಾಡಿನ‌ ಜನರು ಮಹಾಬುದ್ಧಿವಂತರು

ನಮ್ಮ‌ ನಾಡಿನ‌ ಜನರು ಮಹಾಬುದ್ಧಿವಂತರು: 1983 ರಿಂದ‌ ಇಲ್ಲಿಯವರೆಗು ರಾಜಕಾರಣಿಗಳ‌ ಸ್ವಲಾಭಕ್ಕೆ ಕಟ್ಟಿದ‌ ಯಾವ‌ ಪಕ್ಷವನ್ನು ಆಧರಿಸಲಿಲ್ಲ‌. ಅದೇ ಸಮಯದಲ್ಲಿ ಪರ್ಯಾಯ‌‌ ಮಾರ್ಗವಿಲ್ಲದೇ ಇದ್ದ‌ ಕಾಂಗ್ರೆಸ್ ಅಥವಾ ಜೆ ಡಿ ಎಸ್ ಇಲ್ಲವೇ ಭಾ ಜ‌ ಪ‌ ಪಕ್ಷಗಳನ್ನೇ ಆಯ್ಕೆಮಾಡಿದ್ದಾರೆ. ಜನಹಿತ‌ ಪಕ್ಷ‌ ಜನರ‌ ಹಿತಕ್ಕಾಗಿ ಉದಯಿಸಿದೆ. ಗಾರ್ಡ್ ನ್ ಸಿಟಿ ಯೆಂದು ಖ್ಯಾತಿ ಪಡೆದ‌ ಬೆಂಗಳೂರು ನಗರ‌ ಇಂದು ಗಾರ್ಬೇಜ್ ಸಿಟಿಯಾಗಿ ಕುಖ್ಯಾತಿಗೆ ಮರುಳಾಗಿದೆ. ಇದಕ್ಕೆ ದೂರದೃಷ್ಟಿ, ಸಾಮಾಜಿಕ‌ ಹೊಣೆಗಾರಿಕೆಯನ್ನು ಮರೆತ‌ ನಾಯಕರ‌ ಕೊರತೆಯೇ ಕಾರಣವಾಗಿದೆ. ಆಯ್ಕೆಯಾದ‌ ಬೃಹತ್ ಬೆಂಗಳೂರು ಮಹಾನಗರ‌ ಪಾಲಿಕೆಯ‌ ಸದಸ್ಯರು ತಂತಮ್ಮ‌ ಕ್ಷೇತ್ರದ‌ ಸ್ವಚ್ಚತೆ ಬಗ್ಗೆ ಕಾಳಜಿ ತೋರದ‌, ವಹಿಸದ‌ ಕಾರಾಣದಿಂದ‌ ಬೆಂಗಳೂರು ನಗರ‌ ಇಂದು ಗಾರ್ಬೇಜ್ ಸಿಟಿಯಾಗಿ ಕುಖ್ಯಾತಿಗೆ ಮರುಳಾಗಿದೆ. ಬೃಹತ್ ಬೆಂಗಳೂರು ಮಹಾನಗರ‌ ಪಾಲಿಕೆಯಲ್ಲಿ ಎಲ್ಲಾ ಪಕ್ಷಗಳ‌ ಸದಸ್ಯರು ಇದ್ದರೂ ಜನರ‌ ಕಷ್ಟ‌ ದೂರವಾಗಲಿಲ್ಲ‌. ಮಹಾಜನರೇ ಮುಂದಿನ‌ ಬೃಹತ್ ಬೆಂಗಳೂರು ಮಹಾನಗರ‌ ಪಾಲಿಕೆಯಲ್ಲಿ ಈ ಪಕ್ಷಗಳ‌ ಸದಸ್ಯರನ್ನು ಪುನಃ ಆಯ್ಕೆ ಮಾಡಬೇಕೆ ಯೋಚಿಸಿರಿ.