ದೃಷ್ಟಿ ಕೋಣ Vision :

ನಾವು ಜನಹಿತ‌ ಪ್ರಾದೇಶಿಕ‌ ಪಕ್ಷ‌ ಕಟ್ಟಲು ಕಾರಣ:

ನಮ್ಮ‌ ಕರ್ನಾಟಕ‌ ರಾಜ್ಯವು ಜೀವ‌ ನದಿಗಳಿಂದ‌, ಅರಣ್ಯಗಳಿಂದ‌, ಪಶ್ಚಿಮ‌ ಘಟ್ಟಗಳಿಂದ‌, ನೈಸರ್ಗಿಕ‌ ಸಂಪತ್ತಿನಿಂದ‌, ಬಯಲುಸೀಮೆಯಿಂದ‌, ವಿಜ್ನಾನಿಗಳಿಂದ‌, ಬುದ್ಧಿಜೀವಿಗಳಿಂದ‌, ಶ್ರಾಮಿಕರಿಂದ‌,

ಉದ್ಯಮಿಗಳಿಂದ‌, ಗಣಿಗಾರಿಕೆಯಿಂದ‌, ಕೈಗಾರಿಕೆಗಳಿಂದ‌, ಸುಸಂಪದ್ಭರಿತವಾಗಿದೆ. ಆದರೂ ಬಡತನ‌ ಇನ್ನೂ ಜೀವಂತವಾಗಿರುವುದು ವಿಚಾರಕ್ಕೆ ಒಳಮಾಡಿತು.

 

ಇಂದು ರಾಜಕಾರಣ‌ ಮಾಡುತ್ತಿರುವ‌ ಬಹುತೇಕ‌ ಪಕ್ಷಗಳು ಹಣದ‌ ಬಲದಿಂದ‌ ಚುನಾವಣೆಯಲ್ಲಿ ಗೆಲ್ಲುವುದರಿಂದ‌ ತಮ್ಮ‌ ಬಂದವಾಳಕ್ಕೆ ಬಡ್ಡಿ, ಚಕ್ರ‌ ಬಡ್ಡಿ, ಮತ್ತು ಹಲವು ವರ್ಷಗಳಿಗೆ ಅಥವಾ

ತಲೆಮಾರುಗಳ‌ ವರೆಗೂ ಬೇಕಾದ‌ ಸಂಪಾದನೆಗೆ ಚಿಂತಿಸುತ್ತಿರುವುದು ಬಹಿರಂಗದ‌ ಸಂಗತಿಯಾಗಿದೆ. ಅಷ್ಟಲ್ಲದೇ, ಇಂದು ಎಲ್ಲಾ ಪಕ್ಷಗಳಲ್ಲಿ ಬಹುತೇಕವಾಗಿ ಹಳೇ ತಲೆಮಾರಿನ‌ ನಾಯಕರಿಂದ‌

ಮತ್ತು ಅವರ‌ ಸಂತಾನಗಳೇ ಮುಂದುವ್ರೆಯುವುದರಿಂದ‌, ಇತರರಿಗೆ, ಯುವಕರಿಗೆ, ಉತ್ಸಾಹಿಗಳಿಗೆ, ವೈಜ್ನಾನಿಕವಾಗಿ ಚಿಂತಿಸುವವರಿಗೆ, ಹೊಸ‌ ಹೊಸ‌ ಯೋಜನೆಗಳನ್ನು ರೂಪಿಸುವವರಿಗೆ

ಸರಿಯಾದ‌ ಅವಕಾಶಗಳು ಸಿಗದೆ ವಂಚಿತವಾಗುತ್ತಿರುವುದರಿಂದ‌ ನಮ್ಮ‌ ರಾಜ್ಯವು ಪ್ರಗತಿಯನ್ನು ಸಾಧಿಸದೇ ಹಿಂದುಳಿದಿದೆ.

ಇದನ್ನು ತಪ್ಪಿಸಲು:

1. ಇಂದಿನ‌ ಆರ್ಥಿಕ‌ ಅಭಿವೃದ್ಧಿಗೆ ಮೂಲ‌ ವಿದ್ಯುತೇ ಆಧಾರ‌ :

ಆದರೆ ಇದಕ್ಕೆ ಸರಿಯಾದ‌ ಗಮನ‌ ಹರಿಸದ‌ ಎಲ್ಲಾ ಸರ್ಕಾರಗಳೇ ಕಾರಣ‌ ಅದೇ ದಾರಿಹಿಡಿದು ಇಂದಿನ‌ ಶ್ರೀ ಸಿದ್ದರಾಮಯ್ಯ‌ ರವರ‌ ಸರ್ಕಾರವು ನಡೆಯುತ್ತಿರುವುದು ವಿಚಾರಕರವಾಗಿದೆ. ಪ್ರಸ್ತುತ‌

ಲಭ್ಯವಿರುವ‌ ಸೌರ‌ ವಿದ್ಯುತ್ ತಂತ್ರಜ್ನಾನದಿಂದ‌ ನಮ್ಮ‌ ಕರ್ನಾಟಕ‌ ರಾಜ್ಯದಲ್ಲಿ ಸರಿಸುಮಾರು 15,000 (ಹದಿನೈದು ಸಾವಿರ‌) ಮೆಘಾ ವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲು ಅವಕಾಶವಿದೆ

ಅಂದರೆ ಪರಿಸರ‌ ಹಾಳುಮಾಡದೇ ಉತ್ಪಾದಿಸಬಹುದಾದ‌ ಮೂಲವನ್ನು ಕಡೆಗಣಿಸಿ ಇತರೆ ರಾಜ್ಯಗಳಿಂದ‌ ಕರೀದಿಸಲು ತಯಾರಿ ನಡೆಸುತ್ತಿದೆ. ಈ ವರೆಗೂ 1,000 (ಒಂದು ಸಾವಿರ‌) ಮೆಘಾ

ವ್ಯಾಟ್ ಕೂಡಾ ಉತ್ಪಾದಿಸಲು ಸಾಧ್ಯವಾಗಲಿಲ್ಲ‌. ಅದೂ ಅಲ್ಲದೇ ವಿದ್ಯುತ್ ಲೈನ್ ಲಾಸ್, ಕಳ್ಳತನ‌ ತಡೆ, ಬೇಬಾಕಿ ವಸೂಲಾತಿಗೆ (ರಾಜಕಾರಣಿಗಳಿಂದ‌) ಕ್ರಮ‌ ಜರುಗಿಸದೇ ಕೈ ಚಲ್ಲಿ ಕುಳಿತಿದೆ.

 

2. ನಮ್ಮ‌ ನಾಡಿನ‌ ವಿಜ್ನಾನಿಗಳ‌ ಅಪಾರವಾದ‌ ಅನುಭವ‌, ಸಂಶೋಧನೆಗಳ‌ ಫಲಗಳನ್ನು ಅನುಷ್ಟಾನಕ್ಕೆ ತರಲು ಜವಾಬ್ದಾರಿತನ‌ ಹೋರಬೇಕಾದ‌ ಸರ್ಕಾರ‌ ಸ್ಠಾಪನೆಗಾಗಿ ಈ ಹೊಸ‌ ಪ್ರಾದೇಶಿಕ‌

ಪಕ್ಷವನ್ನು ರಚಿಸಲಾಗಿದೆ.

3. ಈಗಿರುವ‌ ಜಲಾಶಯಗಳ‌ ನೀರನ್ನು ಇನ್ನು ವೈಜ್ಞನಿಕವಾಗಿ ಸಮರ್ಪಕರೀತಿಯಲ್ಲಿ ಬಳಸಿಕೊಂಡು ಕೃಷಿ ಭೂಮಿಯ‌ ವಿಸ್ತರಣೆಯನ್ನು ಎರಡು ಪಟ್ಟುಮಾಡಬೇಕಾಗಿದೆ. ಅದರಿಂದ‌ ಆಹಾರ‌

ಧಾನ್ಯಗಳನ್ನು, ತರಕಾರಿಗಳನ್ನು, ಫಲ‌ ‍ ಫುಷ್ಪಗಳನ್ನು, ಬೇಳೆ ಕಾಳುಗಳನ್ನು, ಎಣ್ಣೆ ಕಾಳುಗಳನ್ನು ಅಧಿಕವಾಗಿ ಉತ್ಪಾದಿಸಿ ನಾಡನ್ನು ಸದಾ ಅನ್ನಪೂರ್ಣೆಯಾಗಿ ಅಭಿವೃದ್ಧಿ ಪಡಿಸುವ‌

ಆಶಯದೊಂದಿಗೆ ಈ ಜನಹಿತ‌ ಪಕ್ಷವನ್ನು ಸ್ಠಾಪಿಸಲಾಗಿದೆ.

4. ಮುಂದಿನ‌ ಚುನಾವಣೆ ಬರುವವರೆಗೂ ಈಗಿರುವ‌ ಸರ್ಕಾರಕ್ಕೆ ಜನಪರ‌, ಜನಹಿತ‌ ಯೋಜನೆಗಳ‌ ಸೂಚನೆ, ಸಲಹೆಗಳನ್ನು ನೀಡಿ ನಾಡನ್ನು ಕಟ್ಟುವ‌ ಕೆಲಸ‌ ಮಾಡಲಾಗುತ್ತದೆ.

Our Mission Image: